೧. ಹಿಂದೂಗಳೇ, ಸಂವೇದನಾಶೂನ್ಯ ಕಾಂಗ್ರೆಸ್ ಮುಖಂಡರಲ್ಲಿ
ಹಿಂದೂ ಭಕ್ತರಿಗೆ ಬೆಲೆಯಿಲ್ಲ ಎಂಬುದನ್ನು ಅರಿತುಕೊಳ್ಳಿರಿ !
ಹಿಂದೂ ಭಕ್ತರಿಗೆ ಬೆಲೆಯಿಲ್ಲ ಎಂಬುದನ್ನು ಅರಿತುಕೊಳ್ಳಿರಿ !
ಉತ್ತರಾಖಂಡದ ಮಹಾಪ್ರವಾಹದಲ್ಲಿ ಸಾವಿರಾರು ಹಿಂದೂ ಭಕ್ತರು ಬಲಿಯಾಗಿದ್ದರೂ ಕೇಂದ್ರ ಗೃಹಮಂತ್ರಿ ಸುಶೀಲಕುಮಾರ ಶಿಂದೆಯವರು ಈ ಮಹಾಸಂಕಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಿದ್ಧರಿಲ್ಲ !
೨. ಹಿಂದೂಗಳೇ, ಮತಾಂಧ ಕೆಸ್ತರ ಕುಟಿಲತೆಯನ್ನು ಅರಿತುಕೊಳ್ಳಿರಿ !
ಆದಿವಾಸಿ ಮಹಿಳೆಯರು ಮಗುವನ್ನು ಕಂಕುಳಿನಲ್ಲಿ ತೆಗೆದುಕೊಂಡಂತೆ, ಮದರ ಮೇರಿಯು ಯೇಸುವನ್ನು ಕಂಕುಳಿನಲ್ಲಿ ಎತ್ತಿಕೊಂಡಂತಹ ಪುತ್ಥಳಿಯೊಂದನ್ನು ಝಾರ್ಖಂಡಿನ ಚರ್ಚ್‌ವೊಂದರಲ್ಲಿ ನಿಲ್ಲಿಸಲಾಗಿದೆ. ಇದು ಆದಿವಾಸಿಗಳನ್ನು ಕೆಸ್ತರನ್ನಾಗಿಸುವ ಸಂಚಾಗಿದೆ, ಎಂದು ಆದಿವಾಸಿಗಳ ಧರ್ಮಗುರು ಬಂದನ ಟಿಘಾ ಇವರು ಹೇಳಿದ್ದಾರೆ.
೩. ಹಿಂದೂಗಳೇ, ಭಾಜಪದ ಶಾಸಕರ ಧರ್ಮದ್ರೋಹವನ್ನು ಅರಿತುಕೊಳ್ಳಿ !
ವರ್ಷವಿಡೀ ಆಗುವ ಜಲಪ್ರದೂಷಣೆಯು ಕೇವಲ ಗಣೇಶಮೂರ್ತಿ ವಿಸರ್ಜನೆಯ ಒಂದೇ ದಿನದಲ್ಲಿ ಆಗುತ್ತದೆ. ರದ್ದಿ ಕಾಗದದಿಂದ ಶ್ರೀಗಣೇಶ ಮೂರ್ತಿಯನ್ನು ತಯಾರಿಸಬೇಕು. ಕಾಲಾನುಸಾರ ಧರ್ಮಶಾಸ್ತ್ರದಲ್ಲಿ ಬದಲಾವಣೆಯಾಗುವುದು ಅನಿವಾರ್ಯವಾಗಿದ್ದು ವಿಹಿಂಪಗೆ ಹೊಸದಾಗಿ ಧರ್ಮಶಾಸ್ತ್ರ ಬರೆಯಲು ಹೇಳುವೆನು, ಎಂದು ಭಾಜಪದ ಕೊಲ್ಲಾಪುರದ ಶಾಸಕ ಚಂದ್ರಕಾಂತ ಪಾಟೀಲರವರು ಹೇಳಿದ್ದಾರೆ.
೪. ಜನರೇ, ಮದ್ರಾಸ ಉಚ್ಚನ್ಯಾಯಾಲಯದ ವಿಸ್ಮಯಕಾರಿ ನ್ಯಾಯವನ್ನು ಅರಿತುಕೊಳ್ಳಿ !
ಪ್ರಜ್ಞಾವಂತ ಪುರುಷ ಮತ್ತು ಸ್ತ್ರೀ ಇವರಲ್ಲಿ ಪರಸ್ಪರ ಅನುಮತಿಯಿಂದ ಶಾರೀರಿಕ ಸಂಬಂಧವಾದರೆ ಇಬ್ಬರನ್ನೂ ಪತಿ-ಪತ್ನಿ ಎಂದು ಹೇಳಬಹುದು. ಮದುವೆಯಲ್ಲಿ ಮಂಗಳಸೂತ್ರ, ವರಮಾಲೆ ಹಾಕುವುದು ಇತ್ಯಾದಿಗಳು ಕೇವಲ ಸಮಾಜಕ್ಕೆ ತೋರಿಸಲು ಇದೆ, ಎಂದು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ತೀರ್ಪೊಂದನ್ನು ನೀಡುವಾಗ ಹೇಳಿದ್ದಾರೆ.
೫. ಹಿಂದೂಗಳೇ, ಅಧರ್ಮಿ ರಾಜಕಾರಣಿಗಳು ಮಾಡಿದ ಕಾರುಬಾರಿನ ದುಷ್ಪರಿಣಾಮವನ್ನು ಅರಿತುಕೊಳ್ಳಿರಿ !
ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಕಾಂಗ್ರೆಸ್ಸಿನ ದೇಹಲಿಯ ಮುಖ್ಯಮಂತ್ರಿ ಮಹಿಳೆಯಾಗಿದ್ದೂ ದೆಹಲಿಯು ದೇಶದಲ್ಲಿ ಮಹಿಳೆಯರಿಗೆ ಎಲ್ಲಕ್ಕಿಂತ ಅಸುರಕ್ಷಿತ ನಗರವಾಗಿದೆ. ದೇಶದಲ್ಲಿನ ಮಹಿಳೆಯರ ಮೇಲಾಗುವ ಅತ್ಯಾಚಾರಗಳಲ್ಲಿ ಶೇ.೧೪.೮೮ರಷ್ಟು ಅಪರಾಧಗಳು ನವ ದೆಹಲಿಯಲ್ಲೇ ನಡೆಯುತ್ತವೆ.
೬. ದೇವರ ಮಂಟಪವನ್ನು ಯಾವುದರಿಂದ ತಯಾರಿಸಬೇಕು ?
ಸಾಧ್ಯವಿದ್ದಲ್ಲಿ ದೇವರ ಮಂಟಪವನ್ನು ಚಂದನ ಅಥವಾ ಸಾಗುವಾನಿ ಮರದಿಂದ ತಯಾರಿಸಬೇಕು. ಚಂದನದ ದೇವರ ಮಂಟಪವನ್ನು ತಯಾರಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇತರ ಮರಗಳ ತುಲನೆಯಲ್ಲಿ ಸಾಗುವಾನಿ ಮರದಲ್ಲಿ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ. ದೇವರ ಮಂಟಪದ ಮೇಲಿನ ತುದಿಯತ್ತ (ವ್ಯಕ್ತಿಗೆ ಈಶ್ವರನಲ್ಲಿರುವ ಭಾವದಂತೆ) ದೇವತೆಗಳ ಲಹರಿಗಳು ಆಕರ್ಷಿತವಾಗಿ ಅವಶ್ಯಕತೆಗನುಸಾರ ವಾಸ್ತುವಿನಲ್ಲಿ ಪ್ರಕ್ಷೇಪಿಸಲ್ಪಡುತ್ತವೆ.
೭. ನಮಸ್ಕಾರ ಮಾಡುವಾಗ ಪಾದರಕ್ಷೆಗಳನ್ನು ಏಕೆ ಹಾಕಬಾರದು ?
ಗೌತಮಸ್ಮೃತಿಯಲ್ಲಿ ಹೀಗೆ ಹೇಳಲಾಗಿದೆ. ಸೋಪಾನತ್ಕಶ್ಚಾಶನಾಸನಶಯ ನಾಭಿವಾದನನಮಸ್ಕಾರನ್ ವರ್ಜಯತ್| ಇದರ ಅರ್ಥವೇನೆಂದರೆ ಕುಳಿತುಕೊಳ್ಳುವುದು, ಊಟ ಮಾಡುವುದು, ಮಲಗುವುದು, ಗುರು ಜನರಿಗೆ ನಮಸ್ಕಾರ ಮಾಡುವುದು ಮತ್ತು ಇತರ ಶ್ರೇಷ್ಠ ವ್ಯಕ್ತಿಗಳಿಗೆ ನಮಸ್ಕಾರ ಮಾಡುವುದು, ಈ ಎಲ್ಲ ಕಾರ್ಯಗಳನ್ನು ಮಾಡುವಾಗ ಪಾದರಕ್ಷೆಗಳನ್ನು ಹಾಕಬಾರದು.
No comments:
Post a Comment